ಬುದ್ಧ ಬೆಳಕು ಎಚ್ಚರ
ರಚನೆ : ಕವನ.ಎಸ್
----------------------------------
ದೇವರಲ್ಲ ದೇವ ಬುದ್ಧ, ಮನದೊಡಲ ಕಲಹಗಳಿಗೆ, ಮರದಡಿಯಲ್ಲಿ ಮಾರ್ಗ ಕಂಡ, ಆಸೆಯೇ ದುಖಃದ ಮೂಲ ಎಂದ, ಕರುಣೆ ಯೊಂದೇ ಕಾರ್ಯವೆಂದ ಅಹಿಂಸೆಯೇ ಧರ್ಮ ಎಂದ ಸಂಕೋಲೆಗಳ ಕಳಚಿಟ್ಟ ಸಂಕೀರ್ಣವ ಸುಲಭವಾಗಿಸಿದ ಬುದ್ಧನೆಂದೂ ಬದ್ಧನೇ! ಅರಿತು ನಡೆ ಬುದ್ದನೆಡೆ, ಬುದ್ಧ ಬೆಳಕು,ಎಚ್ಚರ ಸೇರಿಸೋಣ ನಮ್ಮ ನಡೆ ಕರುಣೆ ಕಡಲ ತೀರದಲಿ, ದಿವ್ಯಜ್ಯೋತಿ ಬುದ್ದನ ಧರ್ಮ ದಂಡಯಾತ್ರೆಯಲಿ.
----------------------------------
ನೋಂದಣಿ ಐಡಿ : KPFS2-2047