Submission 7006

ಕೊನೆಯ ಪಯಣ

ರಚನೆ : ರಾಜೇಶ್ ಚಿನ್ನಪ್ಪ

----------------------------------

ಅಳುತಿಹರು ನನ್ನವರು, ಬಂದಿಹರು ಬಂಧುಗಳು ನೆರೆದಿಹರು ಸ್ನೇಹಿತರು, ನಡೀತಿದೆ ಜೋರಾಗಿ ತಯಾರಿ ನನ್ನ ಜೀವನದ ಕೊನೆಯ ಸವಾರಿ... ನನ್ನವರೆಲ್ಲರ ಬಿಟ್ಟು, ನನ್ನದೆಲ್ಲವ ತೊರೆದು ಯಾರ ಮೇಲಿಲ್ಲೂಸಿಟ್ಟು, ಯಾವುದರ ಮೇಲಿಲ್ಲೂ ಪಟ್ಟು ಅರಿತು ಜೀವನದ ಗುಟ್ಟು ಹೊರಟಿರುವೆ ನಾ ಮರಳಿ ಬಾರದ ಲೋಕಕೆ... ನಾಳೆಯ ಜೀವನ ನಡೆಸಲು, ನಿನ್ನೆಯ ಭಾರವ ಹೊರುತ ಇಂದಿನ ಜೀವನ ನಡೆಸುವ ನನ್ನವರೇ , ಮನಸ್ತಾಪವ ಮರೆತು , ಕೋಪವ ತ್ಯಜಿಸಿ ಪ್ರೀತಿಯ ಹಂಚುತ, ವಿಷಾದವಿಲ್ಲದೆ ನಿನ್ನೆ , ನಾಳೆಯ ಚಿಂತೆಯ ಮರೆತು ಈ ಕ್ಷಣ ಬಾಳು ನೀ... ಕೊನೆಯ ವಿದಾಯ ಹೇಳುತ ನಿನಗೆ ಹೊರಟಿರುವೆ ನಾ ಮರಳಿ ಬಾರದ ಲೋಕಕೆ...

----------------------------------

ನೋಂದಣಿ ಐಡಿ : KPFS2-2045

0
Votes
112
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top