Submission 6994

ಅವಳು ನನ್ನವಳು

ರಚನೆ : ಯಮನ್ನಾ ಬಿ ಜಿ

----------------------------------

ಕಗ್ಗತ್ತಲ ಕಾರ್ಮೋಡ ಕವಿದು ಬದುಕು ಕತ್ತಲಾದಾಗ. ಆ ಬದುಕ ತುಂಬಾ ಬೆಳಕ ತುಂಬಿ ಉಸಿರ ಕಾದಳು. ಅದೇನನೋ ಕಂಡು ಬೆವರಿ ಭಯಗೊಂಡು ನಿಂತಾಗ. ಧೈರ್ಯತುಂಬಿ ಬದುಕ ಕಾಯ್ವ ಭದ್ರಕೋಟೆಯವಳು. ನಾ ಪಡೆದ ಮೊದಲ ಸಿಹಿ ಮುತ್ತವಳು ಮೊದಲ ಬೆಚ್ಚನೆಯ ಅಪ್ಪುಗೆಯವಳು ನಾ ಕಂಡ ಮೊದಲ ಗಾಯಕಿ ಅವಳು ಹೃದಯ ತಂತಿಯ ಮೊದಲು ಮೀಟಿದವಳು ನನ್ನ ತುಂಟಾಟದ ಮೊದಲ ಪ್ರೇಕ್ಷಕಿಯವಳು ಮನೆಯ ಮೊದಲು ಪಾಠ ಶಾಲೆ ಮಾಡಿದವಳು ನವಮಾಸ ಹೊತ್ತವಳು ನನಗಾಗಿ ಅತ್ತವಳು ತ್ಯಾಗದ ಜೊತೆ ಸ್ಪರ್ಧಿಸಿ ಗೆದ್ದವಳು ಕರುಳು ಹೆಣೆದ ಋಣಾನುಬಂಧ ಅವಳು ಅವಳು ನನ್ನವಳು ನನ್ನ ತಾಯಿ ಅಂತವಳು

----------------------------------

ನೋಂದಣಿ ಐಡಿ : KPFS2-2033

0
Votes
96
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top