ನಾಡು - ನುಡಿ ಕನ್ನಡ
ರಚನೆ : ಸುನಿಲ್ ಕುಮಾರ್ ಟಿ ಬಿ
----------------------------------
ಹಸುರಿನ ಮಡಿಲು, ಪ್ರೀತಿಯ ಕಡಲು ಭೂವಿ ಸೌಂದರ್ಯಕ್ಕೆ ಕರುನಾಡೆ ಬಾಗಿಲು ಸೌಭಾಗ್ಯವೇ ಇಲ್ಲಿ ಜನಿಸಿದರೆ ಕೋಟಿ ಪುಣ್ಯವೇ ಇಲ್ಲಿ ಬದುಕಿದರೆ ಶ್ರೀಗಂಧದ ಸುಗಂಧವೇ ಇಲ್ಲಿ ಬೆರೆತುಕೊಂಡರೆ ಹೃದಯ ಶ್ರೀಮಂತಿಕೆ ತವರು ಜ್ಞಾನ ಭಂಡಾರದ ಬೇರು ಒಗ್ಗಟ್ಟಿನಿಂದ ಸೇರಿ ಎಳೆಯುವ ಕನ್ನಡದ ತೇರು ನಾಡು-ನುಡಿ ಬೆಸೆದುಕೊಂಡಿದೆ ಜೀವದೊಳಗೆ ಅವಿಭಾಜ್ಯ ಅಂಗವಾಗಿದೆ ಬದುಕಿನೊಳಗೆ ಕನ್ನಡ ನಲಿದಿದೆ ಕನ್ನಡಿಗರ ಮನದೊಳಗೆ ಮೇರೆಯಲಿ ಕನ್ನಡ ಅಂತ್ಯವಿಲ್ಲದ ಆಗಸದಂತೆ ಬೆಳಗಲಿ ಕನ್ನಡ ಸೂರ್ಯನ ಬೆಳಕಿನಂತೆ 'ಕನ್ನಡ' ಭಾಷೆ ಅಮ್ಮನ ಮಡಿದ ಮಗುವಿನಂತೆ.
----------------------------------
ನೋಂದಣಿ ಐಡಿ : KPFS2-2037