ನನ್ನ ಭಾಷೆ ಇದು ಬಂಗಾರ
ರಚನೆ : ಪೂಜಾ ಡಿ
----------------------------------
ಕನ್ನಡ ಭಾಷೆ ಇದು ರುಚಿ ಏಕೆಂದರೆ ಇದು ಬಲು ಶುಚಿ ಸುಂದರ ಸುಲಲಿತವೆಂದರು ಅನ್ಯರು ನೆಚ್ಚಿ || ಇದೊಂದು ಹರಿಯುವ ತೊರೆ ಅಂತೆ ಬಿಳಿ ಹಾಲಿನ ನೊರೆ ಸ್ವರ್ಗ ಲೋಕವಿದು ಕನ್ನಡದೂರೆ ಇಲ್ಲಿ ಕನ್ನಡವೆ ದೊರೆ || ಶ್ರೀಮಂತ ನೀನು ಬಳಸಿದರೆ ಸರಿ ಕನ್ನಡ ಏಕೆಂದರೆ ಇದುವೆ ಸಿರಿಗನ್ನಡ ಎಷ್ಟೋಂದು ಚಂದವಿದು ನೋಡ ಅಂತೆ ಆಗಸದಲಿ ತೇಲುವ ಬೆಳ್ಳಿ ಮೋಡ || ಇದೊಂದು ಮುಗಿಲೆತ್ತರದ ಮಂದಾರ ತಂಪು ತಂಗಾಳಿಯಲ್ಲೆ ಇದರ ಶೃಂಗಾರ ನನ್ನ ಭಾಷೆ ಇದು ಬಂಗಾರ.
----------------------------------
ನೋಂದಣಿ ಐಡಿ : KPFS2-2032