Submission 6924

ಅಮ್ಮ ತುಸು ನೆನಪು...

ರಚನೆ : ವಸಂತ ನಾಯ್ಕ್ ಎಸ್ ಎಂ

----------------------------------

ಅಮ್ಮ ನಿನ್ನ ಮಡಿಲಲ್ಲಿ ತುಸು ಮಲಗುವಾಸೆ... ತೊಟ್ಟಿಲ ತೂಗಿ ಲಾಲಿ ಹಾಡಿದವಳೇ... ಕೈ ತುತ್ತಾ ನೀಡಿ ಪಾಲನೆ ಮಾಡಿದವಳೇ... ಹಕ್ಕಿಯಂತೆ ಜೋಪಾನ ಮಾಡಿದವಳೇ... ಕನಸಿನಲ್ಲೂ ಪ್ರೀತಿ ಹಂಚಿದವಳೇ... ಅಮ್ಮ... ನೀ ಇಲ್ಲದ ಬದುಕು ಶೂನ್ಯ...!! ಆ ಒಂದು ದಿನ ಮರೆಯಲಾಗದು... ಸದ್ದಿಲ್ಲದೇ ಬಂದ ಆ ನಿನ್ನ ಸಾವಿನ ಸುದ್ದಿ... ನಿನ್ನ ಕರುಳ ಕುಡಿಯ ಧ್ವನಿ ಕೇಳಿಸದೇ ಹೋಯಿತೇ... ಅಮ್ಮ... ನಾ ಸೇವೆ ಮಾಡಿಸಿಕೊಂಡೆ ವಿನಃ... ಸೇವೆ ಮಾಡೋ ಅವಕಾಶ ಸಿಗಲಿಲ್ಲ... ನಿನ್ನ ಎದೆಯ ಹನಿ ಸಿಗದೇ ನಾ ನರಳಾಡಿದೆ... ನನ್ನ ಕೊನೆಗೂ ಅನಾಥ ಮಾಡಿದೆಯಾ... ನನ್ನ ಕಂಬನಿಗೆ ಕಾರಣವಾಗಿಬಿಟ್ಟೆಯಾ... ಅಮ್ಮ..

----------------------------------

ನೋಂದಣಿ ಐಡಿ : KPFS2-9986

0
Votes
100
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top