ಬುದ್ಧ
ರಚನೆ : ಉಮಾ ಏನ್ .ಹೆಚ್
----------------------------------
ಇಂದೂ ಕೂಡ ಬೆಳದಿಂಗಳು ಹಾಲು ಚೆಲ್ಲಿದ ಹಾಗೆ ಅದೇ ಮರದ ಕೆಳಗೆ ಕುಳಿತಿದ್ದಾನೆ ಬೆನ್ನು ಕೊಂಚ ಬಾಗಿದೆ ಪ್ರಶ್ನಾರ್ಥಕ ಚಿಹ್ನೆಯ ಹಾಗೆ. ಇತಿಹಾಸದ ಪುಟಗಳಲ್ಲಿ ತಲ್ಲಣ ನೆಲ - ಜಲ, ಗಿರಿ - ಮರ ಪ್ರಕೃತಿಯಲ್ಲಿ ಕಂಪನ ಆ ಮರದ ಕೆಳಗೆ ಕುಳಿತು ಬಿಕ್ಕುತ್ತಿರುವನು ಬುದ್ಧ. ಅದೇ ಜ್ಞಾನೋದಯವಾದ ಬೋಧಿ ವೃಕ್ಷದ ಕೆಳಗೆ ಅಸಹಾಯಕ , ಏಕಾಂಗಿ ಬುದ್ಧ ಸೊರಗಿ ಬಸವಳಿದು ವಿನಾಶ ಕಣ್ಮುಂದೆ ಇದ್ದರೂ ಹೇಳಲಾಗುತ್ತಿಲ್ಲ ತಪ್ಪೆಂದು. ಮುಳ್ಳು ಬೇಲಿಗಳೆದ್ದ ಸರಹದ್ದುಗಳು ನಡುಗುತ್ತಿದೆ, ದೇಹ ಭಯದಿಂದಲ್ಲ ಯುದ್ಧದ ಭೀಕರತೆಗೆ ಹೆಜ್ಜೆ ಮರಗಟ್ಟಿ, ಮಾತು ಮೌನವಾಗಿ ನೆಲಕ್ಕೆ ಬೀಳುತ್ತಿರುವನು ಬುದ್ಧ. ಮಾನವನ ಎಡೆಯಾಳಾಗಿದ್ದ- ಆಸೆಯೇ, ದುಃಖಕ್ಕೆ ಮೂಲವೆಂದ ಬಯಲು ಬೆಳಕಲ್ಲಿ ಮನಃಸಾಕ್ಷಿ ಮುಸುಕೆಳೆದು ಮಲಗಿರಲು , ಬುದ್ಧ ಅವನೊಬ್ಬನೆದ್ದ ಕರಗಿಯೇಹೋದ ನಮ್ಮೊಳಗಿದ್ದ ಬುದ್ಧ.
----------------------------------
ನೋಂದಣಿ ಐಡಿ : KPFS2-9984