Submission 6850

ಯುಗೋತ್ಸವ

ರಚನೆ : ಚಂದ್ರಶೇಖರ

----------------------------------

ಸಾಗಲಿ ಕನ್ನಡಾಂಬೆಯ ನಿತ್ಯೋತ್ಸವದ ತೇರು ಹರಡಲಿ ಎಲ್ಲೆಡೆ ಅಮೃತ ಕಳಶದ ತೇರು ಬರಲಿ ಎಲ್ಲೆಡೆಯಿಂದ ಸಿರಿಗನ್ನಡದ ಕಸ್ತೂರಿ ಮೊಳಗಲಿ ಸವಿಗನ್ನಡ ವಾದ್ಯದ ತುತ್ತೂರಿ ಮೊರೆಯಲಿ ಕನ್ನಡ ಡಿಂಡಿಮದ ಮೊರೆತ ಎರೆಯಲಿ ಅಭಿಮಾನದ ಆರಾಧನೆಯ ಸೆಳೆತ ಮೆರೆಯಲಿ ಕದಂಬ ಮೈಸೂರಿನ ಗತ ಇತಿಹಾಸ ಮೂಡುವುದು ಸರ್ವಜನಾಂಗದಲಿ ಮಂದಹಾಸ ಸಾಗಿದೆ ನಿತ್ಯಹರಿದ್ವರ್ಣ ಫಲಪುಷ್ಪಾರ್ಚನೆಯಲಿ ನದಿ ವನಗಿರಿ ಪಸರಿನ ಸಿರಿಧಾನ್ಯ ಒಕ್ಕಲುತನದಲಿ ಚಿಗುರಿದೆ ಸಿದ್ಧಾಂತ ವೇದಾಂತಗಳ ಸಲಾಕೆಯಲಿ ಕಲೆ ವಿಜ್ಞಾನ ಸುಜ್ಞಾನ ವಿಶ್ವ ಪತಾಕೆಯಲಿ ಯುಗ ಯುಗವಾಗಿ ರಾರಾಜಿಸಲಿ ಸರ್ವಪಥದಲಿ ಕಾವ್ಯೋತ್ಸವ ಇದುವೆ ಕನ್ನಡದ ರಾಜ್ಯೋತ್ಸವ.

----------------------------------

ನೋಂದಣಿ ಐಡಿ : KPFS2-9926

0
Votes
97
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top