Submission 6848

ನೆನಪೆಂಬ ನಾವೆಯ ನಾವಿಕನಾರೆ ?

ರಚನೆ : ದೀಪಿಕಾ ಕೆ

----------------------------------

ಮನದಾಳದಲಿ ಮಳೆ ಹನಿಯಂತೆ ಪುಟಿದೇಳುವುವು ಹಲವು ವರ್ಣದ ಭಾವನೆಗಳು; ಅಕ್ಷರವಾಗಿ ಮೂಡಿಬರಲು ಕಾಯುತಿವೆ ಓಡಲಾಳದಲಿ ಕೂತಿರುವ ಅದೆಷ್ಟೋ ವಿಚಾರಗಳು.. ಇಂದು ತಮ್ಮ ಊರು – ನೆಲ - ನೆಲೆಯ ಮರೆತು ಮನೆಯ ತೊರೆದಿವೆ ಅನೇಕ ಯುವ ಮನ(ಸ್ಸು)ಗಳು.. ಎಂದೋ ಕಾಣುವ ಗುರಿಯೆಂಬ ದಡವ ಸೇರಲು, ಎಷ್ಟೋ ನೆನಪುಗಳಿಂದು ಸ್ಮೃತಿ ಪಟಲದಲಿ ಮಿಂಚಿ ಮರೆಯಾಗುತಿವೆ, ಎಲ್ಲಾ ಒತ್ತಡವ ಮರೆತು ಅರೆಕ್ಷಣ ಕಣ್ಮುಚ್ಚಿ ಕೂರಲು! ಅಂದೆಂದೋ ನಾವೆಲ್ಲಾ ಕುಣಿದೆಹೆವು ಹಕ್ಕಿಯಂತೆ ಹಾರಿ, ಇಂದು ನಾವೆಲ್ಲಾ ಏರಿಹೆವು ಮಾಯಾ ಕುದುರೆಯ ಬೆನ್ನೇರಿ; ನಮ್ಮೆಲ್ಲ ಕನಸುಗಳ ಮೂಟೆಯ ಮಾರಿ! ಹೀಗೆ ಬರೆಯುತ್ತಾ ಹೋದರೆ ನಾ ಹೋಗುವೆ ನೆನಪಿನಂಗಳಕೆ ಜಾರಿ ಇದೀಗ ಮರಳಿ ಹುಡುಕಬೇಕಾಗಿದೆ ದಾರಿ! ಇಂದೇಕೋ ಪದೇ ಪದೇ ಮನದಿ ಮೂಡುತಿದೆ ನನ್ನೂರ ಬದುಕಿನ ಛಾಯೆ; ಬದುಕಲಿ ಅದೆಷ್ಟೇ ದೂರ ಸಾಗಿದರೂ ಹುಟ್ಟೂರೆಂಬುದು ಬಿಟ್ಟರೂ ಬಿಡದ ಮಾಯೆ!

----------------------------------

ನೋಂದಣಿ ಐಡಿ : KPFS2-9922

0
Votes
122
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top