ಒನಪು
ರಚನೆ : ಮಾಣಿಕ ನೇಳಗಿ ತಾಳಮಡಗಿ
----------------------------------
ನೀ ನಡೆದಾಡುವ ದಾರಿಯಲಿ ಪರಿಮಳ ನಗೆಚೆಲ್ಲುತಿದೆ ಗೆಳತಿ ಚೆಂದದಿ ಹೂವುಗಳು ಬಿರಿದು ಶುಭಕೋರುತಿವೆ ನನ್ನೊಡತಿ ಅರುಣ ಹೊನ್ನ ಕಿರಣಗಳಲಿ ಹೊಂಬೆಳಕು ಸೂಸಿಹನು ರತಿ ಹರಿಯುತ ನಲಿದು ಝರಿಗಳು ನವರಾಗ ನುಡಿಸುತಿವೆ ಶಾಂತಿ ನಿನ್ನ ಪ್ರೇಮದ *ಸಂಕೋಲೆ* ಯಲಿ ಬಂಧಿಯಾಗಿ ಬಿಟ್ಟಿರುವೆ ಒಡತಿ ಪರಿಸರವು ಬೆರಗಾಗಿ ಹೋಗಿದೆ ನೋಡಿ ನಿನ್ನೊನಪು ಮಧುಮತಿ.
----------------------------------
ನೋಂದಣಿ ಐಡಿ : KPFS2-9901