Submission 6822

ಜಗದೊಡೆಯ

ರಚನೆ : ಶ್ರೀ ಎಸ್. ಎಸ್. ಮಣ್ಣೂರಮಠ

----------------------------------

ಓ ಧರಣಿ ಪುತ್ರನೇ ಆ ನಿನ್ನ ಧರಣಿಗೆ ಬೆವರ ಹನಿಗಳ ಸುರಿಸಿದಾತನೇ ಜಗಕಾಗಿ ಹೊನ್ನಿನಂತಹ ಬೆಳೆ ಬೆಳೆದವನೇ ಆ ನಿನ್ನ ಹೊನ್ನಿನಂತಹ ಬೆಳೆಗೆ ಬೆಂಬಲ ಬೆಲೆ ಸಿಗದವನೇ ಬೆಂಬಲ ಬೆಲೆ ನೀಡುವ ಸರ್ಕಾರದ ಮುಂದೆ ಕೈ ಕಟ್ಟಿ ಕುಂತವನೆ ನೀ ಬೆಳೆದ ಬೆಳೆಗೆ ನೀನೇ ಬೆಲೆಕಟ್ಟಲಾಗದವನೇ ನಿನ್ನನ್ನು ಕಣ್ಣೆತ್ತಿ ನೋಡದ ಕುರುಡು ಸರ್ಕಾರದ ವಿರುದ್ಧ ಹಗಲಿರುಳೆನ್ನದೆ ದಾರಿಗಿಳಿದು ಧರಣಿ ಮಾಡುವಂತಾದವನೇ ಆ ನಿನ್ನ ಧರಣಿ ಘೋಷಣೆಗಳ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದವನೇ ಬಂದ್ ಗೆ ಕರೆನೀಡಿ ಜಗಕೆಲ್ಲ ರೈತರ ಗತ್ತನ್ನು ತೋರಿದವನೇ ನಿಲ್ಲಿಸದಿರು ಆ ನಿನ್ನ ಹೊನ್ನಿನಂತಹ ಬೆಳೆಗೆ ಹೊನ್ನಿನಂತಹ ಬೆಲೆ ನೀಡಲು ಆ ಸರ್ಕಾರ ನಿನ್ನಲ್ಲಿ ಬರುವರೆಗೆ

----------------------------------

ನೋಂದಣಿ ಐಡಿ : KPFS2-9902

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top