ನಮ್ಮ ಜೀವನ
ರಚನೆ : ಲಾವಣ್ಯ .ಎ.ಎಂ
----------------------------------
ಬೆಳಿಗ್ಗೆ ಎದ್ದ ತಕ್ಷಣ ಬಿಡುವಿಲ್ಲದ ಕೆಲಸ, ಅವುಗಳ ಮಧ್ಯೆ ಹೇಗೆ ತಿಳಿಯಾಗಿಸುವುದು ನಮ್ಮ ಮನಸ. ಒತ್ತಡದ ಕೆಲಸವನ್ನು ಮುಗಿಸಿ ಮನೆಗೆ ಬಂದರು, ಹುಡುಕಿದರೂ ಸಿಗದು ನೆಮ್ಮದಿಯ ವಿಷಯ ಒಂದಾದರು. ತಂದೆ-ತಾಯಿ ಒಡಹುಟ್ಟಿದವರ ಜೊತೆಯೇ ಮಾತುಗಳಿಲ್ಲ, ಇನ್ನೆಲ್ಲಿ ಸಂಬಂಧಿಕರೊಡನೆ ಬೆಸೆಯುವುದು ಬಾಂಧವ್ಯಗಳೆಲ್ಲ. ಮೊಬೈಲ್ ಎಂಬುದು ನಮ್ಮ ಜೀವನದ ಅವಿಭಾಜ್ಯ ಅಂಗ, ಅದನ್ನು ಬಿಟ್ಟು ನಡೆಯುವುದೇ ನಮ್ಮ ಜೀವನದಲ್ಲಿ ಒಂದಾದರು ಪ್ರಸಂಗ. ದೇವಸ್ಥಾನಕ್ಕೆ ಹೋಗಿ ದೇವರಿಗೆ ಕೈ ಮುಗಿಯುವುದಕ್ಕು ಸಮಯವಿಲ್ಲ, ಇನ್ನೆಲ್ಲಿ ಉಳಿಯುವುದು ನಮ್ಮ ಸಂಸ್ಕೃತಿ ಸಂಪ್ರದಾಯವೆಲ್ಲ. ಹಬ್ಬ-ಹರಿದಿನದ ಆಚರಣೆಗಳು ನೆಪಮಾತ್ರಕ್ಕೆ , ಮನೆಯವರೆಲ್ಲರೂ ಸೇರಿ ಒಂದುಗೂಡುತ್ತಿದ್ದೆವು ಆ ಕಾಲಕ್ಕೆ. ಇನ್ನಾದರೂ ಬದಲಾಗಬೇಕು ನಮ್ಮ ಜೀವನದ ಶೈಲಿ, ಬದುಕು ಸಾಗುವಷ್ಟರಲ್ಲಿ ಅರ್ಧದಷ್ಟು ಮೈಲಿ .
----------------------------------
ನೋಂದಣಿ ಐಡಿ : KPFS2-9678