ಅಪ್ಪ
ರಚನೆ : ಗುರುರಾಜ ಸಿದ್ದಪ್ಪ ಚಲವಾದಿ
----------------------------------
ಮಾತು ಕಡಿಮೆ, ಮಮತೆ ಹೆಚ್ಚು ಮುಖದಲ್ಲಿ ಗಂಭೀರ, ಹೃದಯದಲ್ಲಿ ಮೃದುವು. ನಗುನುಡಿಗಳನ್ನೆಲ್ಲ ನಮಗಷ್ಟೇ ಕೊಟ್ಟು ತನ್ನ ನೋವುಗಳನ್ನು ನೆರಳಿನ ಹಿಂದೆ ಮರೆಮಾಡುವವನು ನನ್ನ ಅಪ್ಪ. ಬಿದ್ದರೆ ಹಿಡಿದುಕೊಳ್ಳುವ ಭರವಸೆಯ ಭುಜ ಅವನು ಬೆಳೆದರೆ ದೂರದಿಂದ ನೋಡುವ ಹೆಮ್ಮೆಯ ಬಡಪಾಯಿ ನನ್ನಪ್ಪ. ನಾವು ಸಾಧನೆ ಮಾಡಿದರೂ ಜಗತ್ತು ವರ್ಣಿಸುವ ಮೊದಲು ಅವನ ಹೃದಯವೇ ಮೊದಲು ಹರ್ಷದಿಂದ ತುಂಬುತ್ತದೆ. ನೀನೇ ನನ್ನ ಮೊದಲ ಗುರು, ನನ್ನ ಮೊದಲ ಹೀರೋ, ಮತ್ತು ಎಲ್ಲ ಹಾದಿಗಳಲ್ಲೂ ನಿಂತಿರುವ ಮೌನದ ಬೆಂಬಲ ನೀನು, ಶರಣಾಗಿಬಿಡುವೆ ನಾ ನಿನಗೆ...!!
----------------------------------
ನೋಂದಣಿ ಐಡಿ : KPFS2-9679