Submission 6410

ಪ್ರೇರಣೆ

ರಚನೆ : ವಿನಯ ಮಹಾಂತೇಶ ಕಂಬಾರ.

----------------------------------

ಬಾಳಬೇಕಿದೆ ಬದುಕೊಂದನು ಭರವಸೆಯ ಬೆಣ್ಣಿಗೇರಿಸಿಕೊಂಡು ಬಂದ ಭವಣೆಗಳ ಬರಮಾಡಿಕೊಂಡು ಬೆಟ್ಟದಷ್ಟು ಗಟ್ಟಿಯಾಗಿ, ಬೇಸರವ ಬದಿಗಿಟ್ಟು ಬಯಸುವ ಮನಗಳಿಗೆ ಬದ್ಧವಾಗಿ ಬೆಂದು ,ನೆಂದು ಬಿಗಬೇಕಿದೆ ಗೆದ್ದೆನೆಂದು ಬೇಡವೆಂದವರು ಬೆರಗಾಗುವಂತೆ. ಬರೆಯಬೇಕಿದೆ ಅಧ್ಯಾಯಯೊಂದನು... ಬೇರೂರಿದ ಚಲದೊಡನೆ, ಭಯವಿಲ್ಲದ ಬಗೆಯಲ್ಲಿ ಮಾಡಬೇಕಿದೆ ಸಾದನೆಯೊಂದನು. ಸಕಾರತೆಯ ಸೆರಗಿಗಾಗಿ,ಸ್ವಾಭಿಮಾನದ ಮೆರುಗಿಗಾಗಿ ಬಾಳಬೇಕಿದೆ ಬದುಕೊಂದನು. ಬೆರೆತು, ಬೆಸೆದು, ಬಾಗಿ,ಬೀಗಿ.

----------------------------------

ನೋಂದಣಿ ಐಡಿ : KPFS2-9579

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top