Submission 6408

ಅವ್ವ

ರಚನೆ : ಕನಕರಾಯ

----------------------------------

ನಿನ್ನ ಹೆಜ್ಜೆ ಶಬ್ದ ಕೇಳಿ ಓಡೋಡಿ ಬರುವೆ ಗುಬ್ಬಚ್ಚಿಯ ಗೂಡಂತೆ ಇರುವ ನಿನ್ನ ಮಡಿಲ ಸೇರುವೆ ಬಾ ಮಗನೆ ಎನ್ನುವ ಸ್ವರದಿ ಲಾಲಿ ಹಾಡ ಕೇಳುವ ನಿನಿತ್ತ ಮಮತೆಯಲಿ ಹಕ್ಕಿಯಂತೆ ತೇಲಾಡುವೆ. ಹುಳಿ ಉಬ್ಬಳಿಕೆಯಲೂ ಹಸಿದು ನೋವ ನುಂಗಿ ನಲಿದೆ ನವ ಮಾಸಗಳಲ್ಲಿ ನನ್ನೊತ್ತು ಮಹಾ ರಥದಂತೆ ನಡೆದೆ. ನಾ ಅರಚಿದೊಡೆ ಕೂಸೆ ಎಂದು ಮನ ಮನದಲೂ ಮಿಡಿದೆ ಎದೆಮೃತವ ಎರೆದು ಮಹಾ ಮಾತೆಯಾದೆ. ಜಗದಗಲ ನಿನ್ನ ಮನಸು ಎಲ್ಲವನು ನಿಭಾಯಿಸಿದೆ ಸಂಸಾರದ ಜಂಜಾಟದಲೂ ನೀ ಎನ್ನ ಸಾಕಿದೆ. ಯಾವ ವಿಧಿಯಾಟಕೆ ನಿನ್ನ ಪಯಣ ಮುಗಿಸಿದೆ ನಾ ಮಾಡಿದ ಪಾಪವೆನೋ? ಎಲ್ಲ ನೋವ ಅನುಭವಿಸಿದೆ! ಬಾಳೆಲ್ಲ ನಲುಗಿದೆ ಬಾಲ್ಯದಿ ಆ ಪ್ರೀತಿ ಕಾಣದೆ ಮತ್ತೊಮ್ಮೆ ಮಗುವಾಗುವಸೆ ನೀ ಮರಳಿ ಬರಬಾರದೆ."

----------------------------------

ನೋಂದಣಿ ಐಡಿ : KPFS2-9573

0
Votes
73
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top