Submission 6010

ತಂಬೂರಿ ನಾದ

ರಚನೆ : ಶ್ರೀ ನಾಗರಾಜ ವಲ್ಕಂದಿನ್ನಿ

----------------------------------

ನಮ್ಮನ್ನು ನಮ್ಮ ಪಾಡಿಗೆ ಬಿಟ್ಬುಬಿಡಿ ನಮಗೇಕೆ ಅಂಟಿಕೊಂಡಿದ್ದೀರಿ ನಾನು ತಂಬೂರಿ ಹಿಡಿದು ದೂರ ಬಂದಿರುವೆ ಗುಡಿ ಗುಂಡಾರಗಳಿಂದ ದೂರವಾಗಿ ಗುರುವಿನ ಗುಲಾಮನಾಗಿ ಆದಿಕೇಶವನ ದಾಸ ನಾನು ಕುರಿಗೂ ಕಂಬಳಿಗೂ ಸಂಬಂಧ ಕಟ್ಟಿ ಕುಲದೊಳಗೆ ಬಂಧಿಸದಿರಿ ಗುಡಿ ಗುಂಡಾರಗಳನು ಗುತ್ತಿಗೆ ಹಿಡಿದು ಗುಲಾಮರಂತೆ ಬಡಿದಾಡದಿರಿ ನಾವು ಕುಲನೆಲವನು ಮೀರಿದವರು ಜಾತಿಯ ಮರವನು ಸುಟ್ಟು ಬಂದವರು ಮತ್ತೆ ಅದೇ ಬೂದಿಯಲಿ ಮುಚ್ಚದಿರಿ ಬಯಲಿಗೆ ಬಟ್ಟೆ ತೊಡಿಸಬೇಡರಿ ನಮ್ಮನ್ನು ಬಯಲೊಳಗೆ ಬಯಲಾಗಲು ಬಿಟ್ಟುಬಿಡಿ

----------------------------------

ನೋಂದಣಿ ಐಡಿ : KPFS2-9252

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top