ಅಮ್ಮನ ಮಡಿಲಿನ ಮೌನ
ರಚನೆ : ಮಮತಾ ಜಾನೆ
----------------------------------
ನವಮಾಸವ ಹೊರುವಳು ಸಾಟಿ ಇಲ್ಲದ ಪ್ರೀತಿ ತೋರುವಳು ಮಮತೆಯ ಸಾಗರದವಳು ಮೊದಲ ಗುರು ಆಗುವಳು ಜೀವನ ದಾರಿ ತೋರಿಸುವಳು ಧೈರ್ಯವ ತುಂಬುತ ನಡೆಸುವಳು ಕಣ್ಣೀರು ಒರೆಸಿ ದುಃಖವ ಮರೆಸುವಳು ಸಂತೋಷದ ಸಂಗಾತಿಯವಳು ತಪ್ಪಿದರೆ ತಿದ್ದಿ ಬುದ್ಧಿ ಹೇಳುವಳು ಮಕ್ಕಳ ಜೀವನದ ಕನಸು ಕಟ್ಟುವಳು ನನಸಾಗಲು ಪ್ರತಿ ಹೆಜ್ಜೆಗೂ ಹೋರಾಡುವಳು ಸದಾ ತ್ಯಾಗದ ಮೂರ್ತಿಯವಳು ತನ್ನ ಬದುಕೆ ಮುಡಿಪಾಗಿಟ್ಟವಳು ಬದುಕಿಗೆ ಅರ್ಥ ನೀಡುವಳು ಹೊಗಳಲು ಪದಗಳೇ ಸಾಲದವಳು
----------------------------------
ನೋಂದಣಿ ಐಡಿ : KPFS2-9251