ಹಾಡೊಂದು ನಾ ಹಾಡಿದೆ
ರಚನೆ : ಫಕ್ಕೀರೇಶ ದ್ಯಾಮಪ್ಪ ಸೋಮಣ್ಣವರ
----------------------------------
ಹಾಡೊಂದು ನಾ ಹಾಡಿದೆ ಸ್ವರಗಳೆ ಇಲ್ಲದೆ ರಾಗವ ಮಾಡಿದೆ IIಪII ಹೃದಯದ ನೋವ ಯಾರಿಗೂ ಹೇಳದೆ ಮನದಿ ನೋವು ಚಿಮ್ಮಿ ಕಾಯುತಿರುವೆನು ನೀ ಬಂದು ಮೀಟದೆ ನುಡಿಯವು ಸ್ವರಗಳು ನೀ ಬರದೆ ಹೋದರೆ ಕೊನೆಯಾಗುವವು II೧II ತಿಂಗಾಳಿಯಂತೆ ನೀ ಸುಳಿದಾಗ ರೋಮ ರೋಮವೆಲ್ಲ ರೋಮಾಂಚನಾ ನೀ ದೂರ ಸರಿದರೆ ಕರುಳಲಿ ನೋವು ಸೇರಬಾರದೆ ಗೆಳತಿ ಬೇಗನೆ ನೀನು II೨II ಜನ್ಮಗಳಾ ನಂಟು ಬಿಡಿಸಲು ಆಗದೆ ಮನಕೆ ಮನವ ಬೆಸೆಯಬಯಸಿದೆ ನೀ ಇರದ ಪ್ರತಿ ರಾತ್ರಿ ಕಾಡುವ ನೆನಪ ಮರಿಯದೆ ನಾನು ಮೂಕನಾದೆನು II೩II
----------------------------------
ನೋಂದಣಿ ಐಡಿ : KPFS2-9253