Submission 5736

ನನ್ನ ದಿಂಬಿಗಷ್ಟೇ ಗೊತ್ತು ನಾನು ಏನೆಂದು

ರಚನೆ : ಅಂಜುಮ್.ಬಿ.ಎಸ್

----------------------------------

ನನ್ನ ದಿಂಬಿಗಷ್ಟೇ ಗೊತ್ತು ನಾನು ಏನೆಂದು... ಹೇಳದೇ ಉಳಿದ ಅದೆಷ್ಟೋ ಭಾವಗಳು ಗಂಟಲಲ್ಲೇ ಮೌನತಾಳಿದ ಮಾತುಗಳು ಕನಸಾಗಿಯೇ ಉಳಿದ ಆಸೆಗಳು ಮರೆಯಾದ ನೆನಪುಗಳು ಭವಿಷ್ಯದ ಆಲೋಚನೆಗಳು ನನ್ನ ದಿಂಬಿಗಷ್ಟೇ ಗೊತ್ತು ನಾನು ಏನೆಂದು.... ಪ್ರೀತಿ ವ್ಯಕ್ತವಾಗದೇ ಮನದಲ್ಲೇ ಹುದುಗಿದ ಬಯಕೆಗಳು ಬಯಸಿದ್ದು ಸಿಗದೇ ಅವಿತುಕೊಂಡ ಮನದ ತಲ್ಲಣಗಳು ಹತ್ತಿರದವರ ನಿರ್ಲಕ್ಷ್ಯದ ನೋವುಗಳು ಸೋತಾಗ ಸುರಿದ ಕಣ್ಣಿರುಗಳು ಗೆದ್ದಾಗ ಖುಷಿಗೊಂಡ ಕ್ಷಣಗಳು... ನನ್ನ ದಿಂಬಿಗಷ್ಟೇ ಗೊತ್ತು ನಾನು ಏನೆಂದು...

----------------------------------

ನೋಂದಣಿ ಐಡಿ : KPFS2-9048

0
Votes
73
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top