ವಿರಳಮಾಲೆ
ರಚನೆ : ಶಶಾಂಕ್ ಮಠಾಲೆ
----------------------------------
ತಂಗಾಳಿಯ ತಂಪಲ್ಲಿ, ಧರೆ ಸೀಳಿ ಮೇಲೆದ್ದಿರುವ ಕಲ್ಪವೃಕ್ಷದಡಿ, ವೃಕ್ಷದಲೆಗಳ ಅಬ್ಬರದ ಸ್ವರ ಸಂಗೀತದ ಗುಂಗಲ್ಲಿ, ಬೆಳಕ ಕಿರಣಗಳು ಬರುತ್ತಿದೆ ಎಲೆ ಕೊಂಬೆಗಳ ಜೊತೆ ಸೇಣಸಾಡಿ, ಪಕ್ಷಿಗಳ ಚಿಲಿಪಿಲಿ ನಾದವೆ ಮರೆಯಾಗುತ್ತಿದೆ ಈ ತಂಗಾಳಿಯ ಬೋರ್ಗೆರೆತದಲ್ಲಿ. ಇತ್ತ ತನ್ನ ಬೇರಿನ ನೋವನ್ನು ಮರೆತು ಒಂದು ಹೂವು ಕತ್ತೆತ್ತಿ ನೋಡುತ್ತಿದ್ದೆ ಇವೆಲ್ಲವ ಪ್ರಕೃತಿಯ ಸಂಗಮವ. ಹೂವಾಗು ನೀ, ವಿರಳ ಮಾಲೆಯ ಸೇರು ನೀ.
----------------------------------
ನೋಂದಣಿ ಐಡಿ : KPFS2-9049