Submission 5734

ಈ ಶತಮಾನಕ್ಕೆ ತಿಮ್ಮಕ್ಕ

ರಚನೆ : ಮಲ್ಲಿಕಾರ್ಜುನ ರಾಮಪ್ಪ ಮುಗಲೊಳ್ಳಿ

----------------------------------

ಅವಳು ಕನ್ನಡದ ಮಗಳಂತೆ , ಮರಗಳ ತಾಯಿಯಂತೆ, ಮರಗಳೇ ಆಕೆಯ ಮಕ್ಕಳಂತೆ ಇವಳ ನಿಸ್ವಾರ್ಥ ಸೇವೆ ಎಲೆಮರೆ ಕಾಯಿಯಂತೆ ಕೂಸು ಹೊರುವ ಟೊಂಕದಲಿ ಕೊಡವ ಹೊತ್ತು ಸಾಗಿದಳು ಈ ವೃಕ್ಷಮಾತೆ ಹಸಿರ ಬೆಳೆಸಿ , ಉಸಿರ ಉಳಿಸಿ, ಬಸಿರ ಬೆಸೆದಳು ಈ ಜನ್ಮಜಾತೆ ಇವಳು ಸಾಲುಮರದ ತಿಮ್ಮಕ್ಕ ಎಂದೂ ಬೇಡಲಿಲ್ಲ ಸಹಾಯಕ್ಕಾಗಿ ರೊಕ್ಕಾ ಇಕೆಯ ಮನಸು ಪರಿಸರದಷ್ಟೇ ಚೊಕ್ಕಾ ಇದ್ದಾರ ಇರಬೇಕು ಇಂತಾ ತಾಯಿ ನಮ್ಮ ನಿಮ್ಮ ಅಕ್ಕಾ - ಪಕ್ಕಾ ಆಕೆಯೇ ಈ ಶತಮಾನದ ಮಾದರಿ ಹೆಣ್ಣು ಮರಗಳ ಸಾಕುವ ತಿಮ್ಮಕ್ಕ

----------------------------------

ನೋಂದಣಿ ಐಡಿ : KPFS2-9047

0
Votes
115
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top