ಮೋಡದ ಪಯಣ
ರಚನೆ : ದಿವ್ಯಾ ಡಿ
----------------------------------
ಸಾಗುತ್ತಿತ್ತು ಮೋಡ ಮೌನವಾಗಿ ಹೊರಟಿತ್ತು ಪಯಣ ಯಾವುದೋ ಕಡೆಗೆ ಅದರ ಯಾನ ಮೋಡದೊಂದಿಗೆ ನಾ ಸಾಗಲಾರೆ ಒಮ್ಮೊಮ್ಮೆ ನನ್ನ ಕೈಗೆ ನಾನೇ ಸಿಗಲಾರೆ ಹೊರಟಿತ್ತು ಮೋಡ ತಣ್ಣನೆಯ ಜಾಗವರಸಿ ಬೇಕಿತ್ತು ಅದಕೆ ತಂಪಾದ ಹಸಿರಸಿರಿ ಒಮ್ಮೆ ಕಪ್ಪಾಗಿತ್ತು ಮಗದೊಮ್ಮೆ ಬಿಳುಪಾಗಿತ್ತು ಹೀಗೆ ತನ್ನ ರಂಗಿನಾಟವ ಮುಂದು ವರಿಸಿತ್ತು ನಾನೂ ಅರಸಬೇಕಿದೆ ಮೋಡದ ಜಾಡ ಬಡಪಾಯಿ ಮೋಡತಪ್ಪಿಸಿಕೊಂಡು ಸಾಗಿಹುದು ಅದರ ಗೂಡ ನೀಲನಭದಿ ಸುಂದರ ಅದರ ವಿಹಾರ ನನಗೂ ಸಿದಬಾರದಿತ್ತೇ ಸ್ವಚ್ಚಂದ ಆಕಾಶದ ಸಂಚಾರ. ದಿವ್ಯ ಅತಿಥಿ ಶಿಕ್ಷಕರು ಕಾರಣಿ
----------------------------------
ನೋಂದಣಿ ಐಡಿ : KPFS2-8517