Submission 4994

ಕವಿಯಾಗುವ ಪರಿಯ

ರಚನೆ : ಭೂಮಿಕಾ ಎಸ್. ಕೆ

----------------------------------

ಹೇಗೆ ಬಣ್ಣಿಸಲಿ ನಾ? ಸೂರ್ಯನ ಕಿರಣಕ್ಕೆ ಮೈ ಒಡ್ಡಿದಾಗ ನಕ್ಷತ್ರದ ಕಾಂತಿಗೆ ಕಣ್ಣು ಮಿನುಗಿದಾಗ ಚಂದ್ರನ ತಂಪಿಗೆ ಮನ ತಣಿದಾಗ ಯಾವುದೋ ಮಾತಿಗೆ ಮೌನ ತೀಡಿದಾಗ ಯಾವುದೋ ರಾಗಕ್ಕೆ ಮನದೂಗಿದಾಗ ಯಾವುದೋ ಪ್ರವಾಹದ ಸುಳಿಗೆ ಸಿಲುಕಿದಾಗ ಕವಿಯಾಗುವ ಪರಿಯ ಹೇಗೆ ಬಣ್ಣಿಸಲಿ ನಾ? ಹಳೆಯದೊಂದು ನೆನಪು ಸಿಹಿ ನೋವು ತಂದಾಗ ಹೊಸದೊಂದು ಆಶೆ ಬಿರು ಭರವಸೆಯ ಬಿತ್ತಿದಾಗ ಉರುಳುವ ಈ ಕ್ಷಣ ಬೇರೆಲ್ಲವೂ ಮರೆಸಿದಾಗ ಬರೆಯದ ಸಾಲುಗಳ ಕವಿತೆ ನೀನು ಈಗಾಗಲೇ, ಮನದ ಪುಟದಲ್ಲಿ ನೀ ಗೀಚಿದ ಸಾಲುಗಳ ಹೇಗೆ ತೋರಿಸಲಿ ನಾ, ಕವಿ ನೀನು ಈಗಾಗಲೇ ಕವಿಯಾಗುವ ಪರಿಯ ಹೇಗೆ ಬಣ್ಣಿಸಲಿ ನಾ?

----------------------------------

ನೋಂದಣಿ ಐಡಿ : KPFS2-8516

0
Votes
101
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top