ಮೌನ ಪ್ರೇಮ
ರಚನೆ : ಮನೋಜ್ ಪಿ
----------------------------------
ಮಂಜಿನಲಿ ಮರೆಯಾದ ಮುಖವೊಂದ ಕಂಡೆ ಮೌನದಲಿ ಮಾತಾಡುವ ನಗುವೊಂದ ಕಂಡೆ ಕಣ್ಣಿಗೆ ಕಾಣದ ಕನಸಿನ ಬಿಂಬ ಹರಡಿದಳು ಪ್ರೀತಿ ನನ್ನೆದೆಯ ತುಂಬ ಹೆಸರಿಲ್ಲ ಅವಳಿಗೆ, ಆದರೆ ನೆನಪಿದೆ ಮನದ ಧ್ವನಿ ಅವಳ ನೆನಪು ಬರುತಿದೆ ಸುರಿದಂತೆ ಮಳೆಯ ಹನಿ ಅವಳ ನೋಟದಲಿ ಕಳೆದು ಹೋದೆ ನಾ ಅವಳ ನಗುವಿನ ಸದ್ದು ಕೇಳಿ ಮೌನವಾದೆ ನಾ ಕತ್ತಲಲ್ಲಿ ಅವಳ ನಗುವು ಬೆಳಕಾಯ್ತು ಹೃದಯದಲಿ ಅವಳ ಜಾಗ ಸ್ಥಿರವಾಯ್ತು ಅಜ್ಞಾತಳಾದರೂ ಆತ್ಮದ ಅಂಚಲಿ ಅಂಜಿಸಲಿ ಅವಳ ಪ್ರೇಮವೇ ನನ್ನ ಬಾಳಿಗೆ ಬೆಳಕಾಗಲಿ......
----------------------------------
ನೋಂದಣಿ ಐಡಿ : KPFS2-8515