ಅಮ್ಮ ನಿನ್ನ ಕಾಯಲೆಂದು
ರಚನೆ : ಹರಿಯಬ್ಬೆ ನಾಗಭೂಷಣ. ಡಿ
----------------------------------
ಅಮ್ಮ ನಿನ್ನ ಕಾಯಲೆಂದು ನಾನು ಬರುವೆ ಗಡಿಯ ಕಾಯಲೊಮ್ಮೆ ಅಲ್ಲಿಗೆ ಬರುವೆ.. ನಿನ್ನ ರಕ್ಷಣೆಗೆ ನಾನು ಹೆಗಲು ಕೊಡುವೆ ಊರು ಕೇರಿ ಎಲ್ಲ ಬಿಟ್ಟು ನಾನು ಬರುವೆ... ಅಮ್ಮ ನಿನ್ನ ರಕ್ಷಣೆಗೆ ಜೀವ ತ್ಯಾಗ ಮಾಡುವೆ ಹಗಲು ಇರುಳು ನಿನಗಾಗಿ ನಾನು ಶ್ರಮಿಸಿವೆ... ಎಂತ ಶತ್ರುವೆ ಬರಲಿ ಹೊಡೆದುರುಳಿಸುವೆ ಹಿಮದ ಶಿಖರವೇರಿ ನಿನಗಾಗಿ ನಾನು ಕಾಯುವೆ... ಎದೆಯ ಬಡಿತಕ್ಕೆ ಗುಂಡು ಸಿಡಿದರೂ ನಿನಗಾಗಿ ಉಸಿರಾ ಬಲಿದಾನ ಮಾಡುವೆ...
----------------------------------
ನೋಂದಣಿ ಐಡಿ : KPFS2-8518