Submission 4926

ಹೊನಲು

ರಚನೆ : ಶರಣಮೂರ್ತಿ ಲಗಳೂರು

----------------------------------

ಹೊನಲು ಬಂದಾದೋ, ಗೆಳೆಯ ಹೊನಲು ಬಂದಾದೋ ಅಡವಿಯ ಹಸರಿನ ಪದರೊಳು, ಕೆಸರಿನ ಹುದುಲೊಳು ಕಣಿವೆಯ ಗಾಳಿಯ ಸ್ವರದೊಳು, ಮಂಜಿನ ಹನಿಯೊಳು ಹೊನಲು ಬಂದದೋ ... ಹಕ್ಕಿಯು ಬಡಿಯುತಿಹ ರೆಕ್ಕೆಗೆ ತಾಕಿ ಮೆಕ್ಕೆಯ ತೆನೆಯ ಪುಚ್ಛವ ಕುಲುಕಿ ತಾಕಿದ ಕಣವನು ಚೇತನಗೊಳಸಿ ಇದ ಕಂಡವರ ಮನವನು ಹರಸಿ ಹೊನಲು ಬಂದದೋ ..... ಕಿರಣವು ಹರಿಯಿತು ಕಾವು ಪೇರಿತು ಜಿನುಗಿತು ನನ್ನ ಜೀವ ತೇವವು ಕಣ್ಣೊಳು ಭಿನ್ನಳು ನೀನಿರೆ ಹರಿಯಿತು ಸಖೀಭಾವ. ಹೊನಲು ಬಂದದೋ .....

----------------------------------

ನೋಂದಣಿ ಐಡಿ : KPFS2-8472

0
Votes
94
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top