Submission 4928

ಅಪ್ಪ ಅನಂತ

ರಚನೆ : ಶಂಕರಾನಂದ ಹಿರೇಮರಳಿ

----------------------------------

ಬಗೆ ಬಗೆದು ಅಗೆದರು ಪದಗಳಿಗೆ ಸಿಗದ ಗಗನವು ನೀವು.. ಮೊಗೆಮೊಗೆದು ತೂಗಿದರು ಜಗದೊಳಗೆ ನಿಲುಕದ ಸಾಗರವು ನೀವು..II ಜಗದಗಲ ದೇಗುಲದಿ ಮಿಗಿಲಾಗಿ ಹೆಗಲಾದ ಜಗದೀಶನು ನೀವು.. ಬಗೆ ಬಗೆಯ ಬೇಗೆಯ ನಮಗಾಗಿ ನೀಗಿದ ಶ್ರೀಗಂಧವು ನೀವು..II ಹಗಲಿರುಳು ದುಡಿದು ಬೇಲಿಯಾಗಿ ಕಾಯುವ ಮಾಲಿಯು ನೀವು.. ನಗೆಮೊಗದೀ ಕಾಣುತ ನೋವನೆಲ್ಲ ಬಚ್ಚಿಡುವ ಮಮತೆಯು ನೀವು..II

----------------------------------

ನೋಂದಣಿ ಐಡಿ : KPFS2-8473

0
Votes
98
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top