Submission 4930

ಮಲ್ಲಿಗೆ

ರಚನೆ : ವನಜಾಕ್ಷಿ ಎಸ್ ಮರಳಕುಂಟೆ

----------------------------------

ಹುಟ್ಟಿ ಬಂದೆ ಜನನಿಯಿಂದ ಹೆಣ್ಣು ಎಂದೆ ಜನನದಿಂದ ನನ್ನ ಹೆಸರು ಮಲ್ಲಿಗೆ ಅಣ್ಣ ತಮ್ಮರಿರಲು ಕೂಡಿ ಅವಗೆ ಎನಗೆ ಭೇದ ಹೂಡಿ ಪರರ ಕೊರಳನೇರಿ ಸುತ್ತಿ ಪತಿಯ ಸತಿಯ ಪಟ್ಟ ಹತ್ತಿ ನೆರೆಮನೆಗೆಗಂಧವಾದ ನಾ ಸಂಜೆ ಮಲ್ಲಿಗೆ ಮನೆ ದೇವರ ಪೂಜೆಗೆ ಮನೆಯಲಂಕಾರಕೆ ಮೊಗ್ಗಿನಲ್ಲೆ ಎನ್ನ ಕೊಯ್ದು ದಾರದೊಳಗೆ ಪೋಣಿಸಿಟ್ಟ ಕುಳಿತಲ್ಲೆ ಕಮರುತಿಹ ನಾ ಅರಳದರಳು ಮಲ್ಲಿಗೆ ಸಂಕೋಲೆಗಳ ಸಂಜೆಗೂ ಬಡಿದಾಟಗಳ ಬಿಸಿಲಿಗೂ ದುಂಬಿಗಳ ದಾಳಿಗೂ ದುಮ್ಮಾನಗಳ ಏಟಿಗೂ ಸಹಿಸಿ ಅಲ್ಲೇ ಸುತ್ತ ಸುತ್ತತ್ತಲಿರುವ ಏಳು ಸುತ್ತಿನ ಮಲ್ಲಿಗೆ ತಗ್ಗಿ ಬಗ್ಗಿ ನಡೆದು ಹಾದಿ ಜಿಗಿವ ಮನಕೆ ನಾಕಾ ಬಂಧಿ ತನ್ನಂತೆ ತಾನಾಗದೆ ಜಗದಲ್ಲಿ ಜಿಗಿದಾಡದೆ ಜೀವಂತಿಕೆ ತೋರದ ನಾ ಜಾಜಿ ಮಲ್ಲಿಗೆ

----------------------------------

ನೋಂದಣಿ ಐಡಿ : KPFS2-8474

32
Votes
355
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top