Submission 4922

ಬೇಕಿದೆ ಇನ್ನೊಂದು ಹೋರಾಟ

ರಚನೆ : ದೀಪಾ ಜಿ ಎಮ್

----------------------------------

ದೊರಕಿದೆಯೇ ನಮಗೆ ನಿಜವಾದ ಸ್ವಾತಂತ್ರ್ಯ ಸಿಗುತ್ತಿರುವುದೇ ನಮಗೆ ನಿಜವಾದ ಸಾಮಾಜಿಕ ನ್ಯಾಯ ಕಂಡಿಹೆವು ಏನನ್ನು ನಮ್ಮ ಭಾರತದ ಭುವಿಯಲ್ಲಿ ನಾಡ ದಿಗ್ಗಜರ ಕನಸು ಮಣ್ಣಾಗಿಹುದು ಇಲ್ಲಿ ಧರ್ಮದ ಹೆಸರಿನಲ್ಲಿ ಎಲ್ಲೆಲ್ಲೂ ಬಾಂಬುಗಳ ದಾಳಿ ಜಾತಿಭೇದಗಳ ಹೆಸರಿನಲ್ಲಿ ಮಾನವನ ಮೇಲೆ ಹಾವಳಿ ತಾಯಿ ನಾಡಿನ ಮಣ್ಣಲ್ಲಿ ಸ್ತ್ರೀಯ ಮಾನಭಂಗ ಮುಗ್ಧತೆಯ ಜಗದಲ್ಲಿ ಮಕ್ಕಳ ಆತ್ಮಭಂಗ ಸ್ವರಾಜ್ಯದ ಹೆಸರಿನಲ್ಲಿ ಸ್ವಾತಂತ್ರ್ಯದ ಹರಾಜು ಕಾಪಾಡುವ ಕೈಯಿಂದಲೇ ಹೆಂಡದ ಸರಬರಾಜು ಕಸವನ್ನು ಗೂಡಿಸಿದಂತೆ ಸ್ವಚ್ಛಗೊಳಿಸಬೇಕಾಗಿದೆ ಜಗವ ಅಂಧಕಾರವ ಅಳಿಸಿ ಅರಳಿಸಬೇಕಿದೆ ಮನುಜನ ಮನವ ಮತ್ತೊಮ್ಮೆ ಹೋರಾಡಬೇಕಿದೆ ಕಂಡ ಕನಸ ನನಸಾಗಿಸಲೆಂದು ಎಲ್ಲರೂ ಕೈಜೋಡಿಸಬೇಕಾಗಿದೆ ನಿಜವಾದ ಸ್ವಾತಂತ್ರ್ಯಕ್ಕೆ ಇಂದು

----------------------------------

ನೋಂದಣಿ ಐಡಿ : KPFS2-8469

5
Votes
118
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top