ನನ್ನ ನಾಡೇ ಸ್ವರ್ಗ
ರಚನೆ : ನಿತಿನ್ ಡಿ. ಕೆ
----------------------------------
ಎಲೆ ಇಂದ್ರ ನಿನ್ನಾ ಸ್ವರ್ಗವೇನ್ ಸೊಗಸು ನನ್ನ ನಾಡ ಮುಂದದು ಹಸಿಗೂಸು ಹಸಿರಿನಿಂದಾವೃತವಾದ ಗಿರಿವನ ಪರ್ವತ ಶ್ರೇಣಿ ಭೋರ್ಗರೆದು ಹರಿಯುವ ಜಲಪಾತಗಳ ಏಣಿ ಕಲ್ಲಿನ ಶಿಲೆಗಳ ಕಣ ಕಣದಲಿ ಕನ್ನಡದ ಕೇಕೆ ಪ್ರಾಚೀನ ರಾಜಮನೆತನಗಳು ವಿಜಯ ಪತಾಕೆ ಪರಶಿವನೇ ನೆಲೆಸಿಹನು ಗೋಕರ್ಣದ ಆತ್ಮಲಿಂಗವಾಗಿ ವಿಷ್ಣು ಧರೆಗಿಳಿದು ಬಂದ ಉಡುಪಿಯ ಕೃಷ್ಣನಾಗಿ ಸೃಷ್ಟಿಕರ್ತನೇ ಸೃಷ್ಟಿಯಾದ ಕಿಕ್ಕೇರಿಯ ಬ್ರಹ್ಮೇಶ್ವರ ನಾಗಿ ನನ್ನೀ ಸ್ವರ್ಗದ ಇಂದ್ರನೇ ಅಮೋಘವರ್ಷನು ರನ್ನ ಪೊನ್ನ ಜನ್ನರೇ ಇಲ್ಲಿ ತ್ರಿಮೂರ್ತಿಗಳು ಜ್ಞಾನಪೀಠಗಳೇ ಇಲ್ಲಿ ಅಷ್ಠ ದಿಕ್ಕುಗಳ ಪಾಲಕರು ನನ್ನ ನೆಲದ ಅರ್ಧದ ಅರ್ಧವೇ ಸಾಕು ಇನ್ನೊಂದು ಸ್ವರ್ಗ ನನಗೇಕೆ ಬೇಕು.
----------------------------------
ನೋಂದಣಿ ಐಡಿ : KPFS2-8445