Submission 4880

ಎಲ್ಲಿಲ್ಲ ಹೇಳಿ ಕನ್ನಡ?

ರಚನೆ : ಲಿಖಿತ ಜಿ

----------------------------------

ಮಾತು ಕಲಿಸಿದ ಕನ್ನಡಮ್ಮನ ಹೊಗಳುವಷ್ಟು ಮಾತು ಬಾರದ ಮೂಗಿ ನಾನು! ರೋಮ ರೋಮದಲ್ಲಿ ಬೆರೆತ ಅಕ್ಷರಗಳ ವಿವರಿಸದಷ್ಟು ಕಡು ಬಡವಿ ನಾನು! ಹೊಗಳಿಕೆಗೆ ನಿಲುಕದ ಆ ನನ್ನವ್ವನ ಬಣ್ಣಿಸಲು ಇರದು ಪದಗಳ ಮಿತಿ, ಬತ್ತುವುದಂತದ್ದಲ್ಲ ಅವಳ ಮೇಲಿನ ಭಕುತಿ! ಎಲ್ಲಿಲ್ಲ ಹೇಳಿ ಕನ್ನಡ?! ಹುಟ್ಟುತ್ತಲೇ ರವಿ ಚೆಲ್ಲೊ ಕಿರಣದ ಬಣ್ಣದಲ್ಲಿ, ಮುತ್ತೈದೆಯ ಹಣೆ ಕೆನ್ನೆಯಲ್ಲಿ, ಎಳೆ ಕಂದನ ತೊದಲು ನುಡಿಗಳಲ್ಲಿ, ಕವಿರತ್ನರ ಲೇಖನಿಯ ಶಾಹಿಯಲ್ಲಿ! ನಮ್ಮೆಲ್ಲರ ಹೃದಯದಲಿ, ಕನ್ನಡವೊಂದೇ ಹರಿಯಲಿ, ಕನ್ನಡವೊಂದೇ ಉಸಿರಾಗಲಿ! ಕನ್ನಡವೊಂದೇ ಉಸಿರಾಗಲಿ!

----------------------------------

ನೋಂದಣಿ ಐಡಿ : KPFS2-8431

41
Votes
204
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top