Submission 4882

ಮನದ ಕಡಲು

ರಚನೆ : ಸ್ವಾತಿ

----------------------------------

ಬದುಕಿನ ಏರುಇಳಿತದ ಹಾದಿಯಲಿ ಜೊತೆಗಾರರು ಯಾರು? ಎಲ್ಲವ ಅರಿತು ಅರಿಯದಂತೆ ಮೌನಿಯಾಗಿರುವ ಕಾಲ! ನಾಳಿನ ಚಿಂತೆಯಲಿ ಮರೆತೆವು ಇಂದು ಅಂತರಂಗದ ಕದನದಲಿ ಮಿಂದು ಸುಳಿದಾಗ ನೂರು ಚಿಂತೆಗಳು ಬರಿದಾಯಿತು ಎಲ್ಲಾ ಭರವಸೆಗಳು.. ಕನಸೆಂಬ ದೋಣಿಯಲಿ ತೇಲುತ್ತಾ ದಡವ ಹುಡುಕಿದೆವು ಸುತ್ತಾಮುತ್ತಾ ಹೊಸ ಕಿರಣಗಳ ಅಲೆಗಳಲಿ ಸುಖವ ಕಂಡೆವು ಮನದ ನಿಶ್ಚಲತೆಯಲಿ!

----------------------------------

ನೋಂದಣಿ ಐಡಿ : KPFS2-8432

121
Votes
526
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top