ಈ ಜಗದ ಸೊಬಗು ನನ್ನದು
ರಚನೆ : ತಾರಾನಾಥ್ ಕಾಂತರಾಜಪುರ
----------------------------------
ಕೊಳ್ಳಲೆಲ್ಲೂ ಸಿಗದು, ಕಟ್ಟಲಂತೂ ಆಗದು ಆದರೂ ಈ ಜಗದ ಸೊಬಗು ನನ್ನದು ಆ ತೇಲೋ ನೀಲಿಯ ಮುಗಿಲು ರವಿಹೊಮ್ಮುವ ತಿಳಿ ಹೊಂಬಿಸಿಲು ಬಾನಿಗೆ, ನಾ ಕಟ್ಟದ, ಗಿರಿ ಬೆಟ್ಟಗಳ ಮೆಟ್ಟಿಲು ಆದರೂ ಈ ಜಗದು ಸೊಬಗು ನನ್ನದು ಈ ಸುಂದರ ಪ್ರಕೃತಿಯ ಮಡಿಲು ಕೇಳದೆ ಗರಿಬಿಚ್ಚಿ ಕುಣಿವ ನವಿಲು ನಾ ನೆಡದ ಗಿಡಮರಗಳ ಸಾಲು ಆದರೂ ಈ ಜಗದು ಸೊಬಗು ನನ್ನದು ಮರದಿಂದ ಮರಕೆ ಹಾರುವ ಅಳಿಲು ಸೋನೆ ಮಳೆಯ ಸಂಗೀತದ ಹೊನಲು ಇವು ನಾ ಬರೆಯದ ಕವಿತೆಗಳ ಸಾಲು ಆದರೂ ಈ ಜಗದ ಸೊಬಗು ನನ್ನದು
----------------------------------
ನೋಂದಣಿ ಐಡಿ : KPFS2-8426