Submission 4608

ನೆರಳು

ರಚನೆ : ಸಾವಿತ್ರಿ ವಿ.ಎಸ್

----------------------------------

ಪ್ರತಿ ಕೆಲಸದಲ್ಲೂ ಜೊತೆ ಇರುವ ಗೆಳತಿ! ಗಮನಕ್ಕೆ ಬರದ ಏಕೈಕ ಸಂಗಾತಿ!! ಬಣ್ಣ ಬಟ್ಟೆ ಯಾವುದಿರಲಿ,ನೀ ಮಾತ್ರ ಕಡುಗಪ್ಪು! ನಿನಗಿಲ್ಲದಿದ್ದರೂ ಅಕ್ಷಿ ಪ್ರತಿ ಕಾರ್ಯಕ್ಕೂ ನೀ ಸಾಕ್ಷಿ!! ದೂರಕ್ಕೆ ತಕ್ಕಂತೆ ನೀ ತಾಳುವೆ ವಿವಿಧ ಆಕಾರ! ಬೆಳಕಿನ ಎದುರಿಗೆ ನಿನ್ನದು ಹಲವು ಪ್ರಕಾರ!! ಚಲನೆಗೆ ತಕ್ಕಂತೆ ನಿನ್ನ ಗತಿ!! ನಕ್ಕರೂ ಅರಳದ, ಅತ್ತರೂ ಮುದುಡದ ನಿರ್ಲಿಪ್ತ ಆಕೃತಿ!! ಗಾಡಾಂಧಕಾರದಲ್ಲಿ ಐಕ್ಯಗೊಳ್ಳುವುದೇ ನಿನ್ನ ಸ್ಥಿತಿ!!

----------------------------------

ನೋಂದಣಿ ಐಡಿ : KPFS2-8239

0
Votes
112
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top