Submission 4321

ನವೆಂಬರ್ ಪ್ರೀತಿ

ರಚನೆ : ವಾಸವಿ ಗುಡೂರ

----------------------------------

ಬೆಳಗಲಿ ದಿಗಂತದಿ ಕನ್ನಡದ ಜ್ಯೋತಿ ಮೊಳಗಲಿ ಎಲ್ಲೆಡೆ ಕರುನಾಡ ಖ್ಯಾತಿ ಬಳಸು ಮನೆ-ಮನದಿ ಕನ್ನಡವ ಯಥಾಶಕ್ತಿ ಗಳಿಸು ಪರಭಾಷಾವ್ಯಾಮೋಹದಿಂದ ಮುಕ್ತಿ ಓದು ಪಂಪ ವ್ಯಾಸ ಬೇಂದ್ರೆ ಕುವೆಂಪು ಕೃತಿ ಊದು ಕಿವಿಯಲಿ ದಾಸಶರಣ ತಿಂಮನ ಸೂಕ್ತಿ ಉತ್ತು ಕನ್ನಡಸಾಹಿತ್ಯಾಧ್ಯಯನದ ಸಂಸ್ಕೃತಿ ಬಿತ್ತು ಅಚ್ಚ ಕನ್ನಡದಿ ವ್ಯವಹರಿಸುವ ಪದ್ಧತಿ ಏಳು ಕನ್ನಡತಿ ತೊರೆದು ನಿರ್ಲಕ್ಷ್ಯ ನಿರಾಸಕ್ತಿ ಬೆಳೆಸು ನಾಡು ನುಡಿಯಲಿ ಅಭಿಮಾನ-ಆಸಕ್ತಿ ಬಿಡು ನವೆಂಬರ್ ಮಾಸದ ಮಾಸುವ ಈ ಪ್ರೀತಿ ಮುಡುಪಿಡು ನಿನ್ನೀಜೀವನವ, ಇದು ಕನ್ನಡದ ಆಸ್ತಿ ಪಸರಿಸು ಸವಿಗನ್ನಡಗಂಧದ ಪರಿಮಳೋಕ್ತಿ ಉಸಿರುಸಿರಲಿ ನೆಲೆಸಲಿ ಸಿರಿಗನ್ನಡದ ಭಕ್ತಿ

----------------------------------

ನೋಂದಣಿ ಐಡಿ : KPFS2-8026

9
Votes
240
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top