ಯಾರಿಗೂ ಕೇಳದ ಕೂಗು
ರಚನೆ : ಅಪ್ಪು ರಾಜ್ ಬಿ
----------------------------------
ಅಳಿಸುವವರಿರುವಾಗ ಎಲ್ಲಿದೆ? ನ್ಯಾಯ ನ್ಯಾಯದೇವತೆಗೆ ಮನತಟ್ಟಲಿಲ್ಲ ಈ ಅನ್ಯಾಯ ಎನ್ನ ನೋವಿನ ಕಣ್ಣೀರು ಯಾರಿಗೂ ಕಾಣಲಿಲ್ಲ. ಕಂಡರೂ ಅವರಿಗೆ ಮನ ಮುಟ್ಟಲಿಲ್ಲ ನಿಮ್ಮ ಕರುಣೆ,ಪ್ರೀತಿ ಅನುಕಂಪ ಬೇಕಿಲ್ಲ. ಬಲವಂತದ ಕ್ಯಾಂಡಲ್ ಬೆಳಕು ಅಗತ್ಯವಿಲ್ಲ ಒಂದೆರಡು ದಿನದ ಟ್ರೆಂಡಿಂಗ್ ಅವಶ್ಯಕತೆವಿಲ್ಲ ಎನಗಾದ ಅನ್ಯಾಯಕ್ಕೆ ಪರಿಹಾರ ಬೇಕಿಲ್ಲ 'ಸಂತ್ರಸ್ತೆ 'ವೆಂಬ ಬೇಡದ ಪಟ್ಟಿ ದುಷ್ಟರ ಶಿಕ್ಷಿಸಿ ಹೆಡೆಮುಡೆ ಕಟ್ಟಿ ನಾ ಅಳಿದರು, ನಿಮ್ಮ ಸಹೋದರಿಯರೆಂದಿಗೂ ಅಳಿಯದಿರಲಿ ಗಂಡು ಹೆಣ್ಣಿಗಿಂತ ಬಲದಲ್ಲಿ ಬಲಶಾಲಿಯಂತೆ ಹೆಣ್ಣಿನ ಮೆಲ್ಬಾಗ ಹಾಲು ಉಣಿಸುವ ಅಮೃತವಂತೆ ಅವಳ ಕೇಳಬಾಗ ಜನ್ಮ ನೀಡುವ ಗರ್ಭ ಗುಡಿಯಂತೆ ಇದನ್ನರಿತು ಮುಂದೆ ನೀ ನಡಿ ಪುರುಷ ಸುಖ ಜೀವನದಿಂದ ಬಾಳಿ ಬದುಕಿ ನೂರಾರು ವರುಷ ನಿಲ್ಲಲಿ ಹೆಣ್ಣಿನ ಮೇಲಿನ ದೌರ್ಜನ್ಯ ಇರಲಿ ಅವಳೊಂದಿಗೆ ಸೌಜನ್ಯ.
----------------------------------
ನೋಂದಣಿ ಐಡಿ : KPFS2-8022