ತಾಯಿಯ ಪ್ರೀತಿ
ರಚನೆ : ಸೌರಭಾ. ಬಿ
----------------------------------
ತಾಯಿಯ ಮಡಿಲು ಪ್ರೀತಿಯ ಕಡಲು. ತಾಯಿ ನಿನ್ನ ಪ್ರೀತಿ, ನನಗೆ ನೀ ಹಚ್ಚಿದೆ ಪ್ರೀತಿಯ ಹಣತೆ ನೀ ಕರುಣಾಮಯಿ ಎಂದೇ ಪ್ರಖ್ಯಾತೆ. ಗರ್ಭದಲ್ಲಿ ನನ್ನನಿರಿಸಿ,ನನಗೆ ಜೀವ ಕೊಟ್ಟ ದೇವತೆ. ನನ್ನ ನಗುವಿನಲ್ಲಿ ನಿನ್ನ ನೋವ ಮರೆತ ಪುಣ್ಯದಾತೆ. ನಿನ್ನ ಪ್ರೀತಿಯಲ್ಲಿ ಇಲ್ಲ, ಯಾವುದೇ ಕೊರತೆ ಓ ತಾಯಿ ನಿನ್ನ ಪ್ರೀತಿಗಾಗಿ ನಾ ಮನಸೋತೆ. ಪದಗಳಲ್ಲಿ ವರ್ಣಿಸಲಾಗದು ನಿನ್ನ ಮಮತೆ ನೀನೊಂದು ಪ್ರೀತಿಯ ಧಾತೆ. ನಿನ್ನಿಂದ ನಾ, ಕಲಿತೆ ವಿನಮ್ರತೆ ಅದಕ್ಕಾಗಿ ನಿನಗೆ ಅರ್ಪಿಸುವೆ ಕೃತಜ್ಞತೆ.
----------------------------------
ನೋಂದಣಿ ಐಡಿ : KPFS2-7700