Submission 3882

ಯಾರಿಗೆ ಸುವರ್ಣಯುಗ?

ರಚನೆ : ಈಶ್ವರ್

----------------------------------

ಯಾರದೋ ಕಾಲ,ಯಾರಿಗೋ ಸುವರ್ಣ ಯುಗ ನನ್ನವರಿಗೆ ಮಾತ್ರ ಕತ್ತಲೆಯುಗ ಜಾತಿ ಮೈಲಿಗೆ ಹೆಸರಲ್ಲಿ ನೂಕಲ್ಪಟ್ಟವರು ಹಸಿದ ಹೊಟ್ಟೆಗೆ ಇಂಚು ಬಟ್ಟೆಗೆ ಪಾದಕ್ಕೆ ಮೆಟ್ಟಾಗಿ,ನೆಲಕ್ಕೆ ಹಾಸಿಗೆಯಾಗಿ ದುಡಿದು ಮಡಿದವರು ನನ್ನವರು ಯಾವ ರಾಜರ ಯುಗವಾದರೇನು ದುಡಿದು ದಣಿದವರು ನನ್ನವರೇ ಅವರ ಮನೆಗೆ ಇಟ್ಟಿಗೆ ಗೋಡೆಯಾದರು ಗೋಡೆಗಳಿಗೆ ಇವರದೇ ನೆತ್ತರು,ಬೆವರೆ ಸುಣ್ಣ ಅವರ ಭೋಗದ ಬದುಕಿಗೆ ಪಲ್ಲಂಗವಾದರೂ ಸುಖ ಸಿರಿ ಸಾಮ್ರಾಜ್ಯಕ್ಕೆ ಸೈನ್ಯವಾದರು ಅವರ ಉಳಿವಿಗೆ ಇವರು ಅಳಿದರು ಇದನ್ನ ಸೌದಯನ್ನಲೇ ?ಅರಮನೆಯನ್ನಲೇ ? ನನ್ನವರ ಸಮಾಧಿಯನ್ನಲೇ?

----------------------------------

ನೋಂದಣಿ ಐಡಿ : KPFS2-7671

0
Votes
122
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top