Submission 3884

ಧೈರ್ಯ, ನಂಬಿಕೆ ಮತ್ತು ಭರವಸೆಯ ಪಯಣ

ರಚನೆ : ರವಿಕುಮಾರ ಎನ್ ಜಿ

----------------------------------

ಕತ್ತಲೆ ಬಂದು ಕಣ್ಣೀರು ತಂದಿತು, ಆದರೂ ನಂಬಿಕೆ ಹೃದಯ ತುಂಬಿತು. ಅಘಾತದ ಹೊಡೆತ ಜೀವನ ತಿರುಗಿತು, ದೇವರ ಕೃಪೆಯಿಂದ ಉಸಿರು ಉಳಿತು. ಮಗನ ಮಾತು ಆಶೆಯ ಕಿಡಿಯಾಯಿತು, ಭಯದ ಮಧ್ಯೆ ಧೈರ್ಯ ಬೆಳಗಾಯಿತು. ಸ್ನೇಹಿತರ ಪ್ರಾರ್ಥನೆ ಶಕ್ತಿ ನೀಡಿತು, ಮಾನವೀಯತೆ ದೇವರ ರೂಪ ತೋರ್ಪಡಿತು. ಪ್ರತಿ ನೋವು ಪಾಠವಾಯಿತು, ಪ್ರತಿ ಕಣ್ಣೀರು ಪ್ರಾರ್ಥನೆಯಾಯಿತು. ವೈದ್ಯರ ಶ್ರಮ ದೈವದ ಕೃಪೆಯಾಯಿತು, ಮಾತೃ ಕಣ್ಣೀರು ಜೀವದ ಹೂವಾಯಿತು. ಇಂದು ಹೇಳುವೆ ನಾನು ಖಚಿತವಾಗಿ ನಂಬಿಕೆಯೇ ಬದುಕಿನ ನಿಜದ ಜಯಗೀತೆ.

----------------------------------

ನೋಂದಣಿ ಐಡಿ : KPFS2-7672

7
Votes
217
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top