Submission 3880

ಅಮ್ಮ

ರಚನೆ : ಅಂಬಿಕಾ ಗಾಣಿಗ

----------------------------------

ಬಸಿರೊಳಗಿಟ್ಟೆ, ಉಸಿರನೆರೆದು ಜೀವ ಕೊಟ್ಟೆ, ಮೊಳೆಯನೂಡಿ, ಮುತ್ತನಿಟ್ಟೆ, ತುಟಿಯ ತೇವ ಆರಿತಷ್ಟೇ, ಒಂಟಿ ಮಾಡಿ ಹೊರಟೇ ಬಿಟ್ಟೆ! ಯಾಕಮ್ಮಾ.... ನನ್ನ ಮೇಲೆ ನಿನಗಷ್ಟು ಸಿಟ್ಟೆ? ಒಂಟಿಯೆಂದರೆ ಒಂಟಿಯೇನಲ್ಲ! ತಬ್ಬಲಿಗೆ, ಸುತ್ತಲಿನವರ ಪ್ರೀತಿ ಸಿಕ್ಕಿತ್ತು, ಆದರೂ ನಾ ಗೆದ್ದಾದ, ಸೋತಾಗ, ನಗುವಾಗ, ಅಳುವಾಗ, ಕರೆದಾಗ, ನೆರೆದಾಗ,ಕನವರಿಸುವಾಗ ನಿನ್ನ ಮಡಿಲು ಬೇಕಿತ್ತು ಮರಳಿ ಬಾ- ನನಗಾಗಿ ತಾ, ಮಮತೆಯ ಕೌಸ್ತುಭ! ಮಾಡು ಮತ್ತೆ ಜೀವನ ಪಾವನ ಕನಸ ತೊಟ್ಟಿಲ ಕಟ್ಟಿ ಕಾಯುತ್ತಿರುವೆ ನಾ

----------------------------------

ನೋಂದಣಿ ಐಡಿ : KPFS2-7670

61
Votes
318
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top