ನಗುವಿನ ದೀಪ
ರಚನೆ : ಜೆ.ವಿ. ಪ್ರಸನ್ನ
----------------------------------
ಯಾರು ಕಲಿಸಿದರು ಹೂವಿಗೆ? ಮುಂದೆ ಬಾಡುವೆನೆಂದು ಅರಿತೂ ಅರಳಿ ನಗುವ ಪರಿಯನು... ಕಿತ್ತು ಬಿಸುಡುವ ಕೈಯಿಗೂ ಮಂದಹಾಸವೇ ಮೊದಲಿಗೆ ದೂರದಿಂದಲೇ ನಗುವ ಮನಸಿಗೂ ಅವಳ ಮನಸೇ ಪ್ರೇರಣೆ ಮುಡಿಯನೇರಿದ ಕುಸುಮಕೂ ಹೆಗ್ಗಳಿಕೆಯ ಹಮ್ಮಿಲ್ಲ ಮುಡಿಯ ಸೇರದೆ ಬಿದ್ದರೂ ಪಾಪಪ್ರಜ್ಞೆಯ ನೋವಿಲ್ಲ ನಗುವೇ ಗುರುತು ಹೂವಿಗೆ ಬಾಳು ಖುಷಿಯ ದೀವಿಗೆ... ಬಾಡಿ ಉದುರುವ ತನಕವೂ ನಗುವ ಹಂಚುವ ಸೇವೆಯೇ!
----------------------------------
ನೋಂದಣಿ ಐಡಿ : KPFS2-7215