Submission 3274

ಅನ್ನದಾತ

ರಚನೆ : ರಾಘವೇಂದ್ರ ಸಿ.ಎಸ್

----------------------------------

ಅನ್ನದಾತನೇ ಓ ಜೀವದಾತನೇ ಲೋಕಕೆ ಅನ್ನವ ನೀಡುವಾತನೇ ಸರಳತೆಯ ಸೂತ್ರದಲ್ಲಿ ನೆಲೆ ನಿಂತವನೇ ಸರ್ವರ ಹಿತವ ಮನದಿ ಬಯಸುವ ನಿಜ ಮಹಾತ್ಮನೇ |೧| ಪ್ರೀತಿಯ ಬೀಜವ ಬಿತ್ತಿದ ಒಲುಮೆಯ ಸಂಜೀವಿನಿ ಭರವಸೆಯ ಬೆಳೆಯ ತೆಗೆದು ಲೋಕದ ಹಸಿವ ನೀಗಿಸುವಾತ ಕಾರುಣ್ಯದ ಭಾವವಿರುವ ಜನನಿ |೨| ಹಗಲು ರಾತ್ರಿ ಬೆವರ ಸುರಿಸಿ ತ್ಯಾಗದಿ ದೇಶದ ಹಿತವ ಕಾಯುವೆ ಹಸಿದ ಒಡಲಿಗೆ ಅನ್ನವನ್ನಿಕ್ಕುವೆ ನಿನ್ನ ಮಹಿಮೆ ಅಪಾರ ಸಾಲದಾಗಿವೆ ನಿನ್ನ ವರ್ಣಿಸಲು ಅಕ್ಷರ |೪|

----------------------------------

ನೋಂದಣಿ ಐಡಿ : KPFS2-7217

13
Votes
163
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top