Submission 3022

ನನ್ನ ತಾಯಿ ಭುವನೇಶ್ವರಿ.

ರಚನೆ : ಬಸಯ್ಯ ಹಿರೇಮಠ

----------------------------------

ಕೆನ್ನೆಗೆ ಅರಿಶಿನ, ಹಣೆಗೆ ಕುಂಕುಮ, ಮೈತುಂಬಾ ಗಂಧವ ಹಚ್ಚಿದವಳು ನನ್ನ ತಾಯಿ ಭುವನೇಶ್ವರಿಯೋ, ಹನಿ ಹನಿ ನೀರಿನಲ್ಲಿ ನದಿಯಾಗಿ ಹರಿಯುವಳು, ಅಲೆಯಾಗಿ ನೆಲೆಯಾಗಿ ಸಮುದ್ರವಾಗಿ ಹರಿಯುವಳು ನನ್ನ ತಾಯಿ ಭುವನೇಶ್ವರಿಯೋ, ಹಸಿದವರಿಗೆ ಅನ್ನವಾಗಿ ಧನಿದವರಿಗೆ ಹೊಂಗೆಯ ನೆರಳಾಗಿ, ಬೇಸರದಿ ನಡೆದ ದೇಹಕ್ಕೆ ಆಶ್ರಯವಾಗಿ ಸದಾ ಜೊತೆಗೆ ಇರುವವಳು ನನ್ನ ತಾಯಿ ಭುವನೇಶ್ವರಿಯೋ. ಇವಳಿಗೆ ಅರಿಶಿನದ ಅಂಧ ಹೆಚ್ಚು, ಬೆಳಕಿನ ತಿಳಿ ಬಣ್ಣವೂ ಹೆಚ್ಚು, ಹಸಿರಿನ ಮೈಬಣ್ಣವೂ ಹೆಚ್ಚು, ಉಸಿರು ಉಸಿರಿಗೂ ಇವಳ ಕಂಪು ಹೆಚ್ಚು, ಎಲ್ಲವನ್ನು ಹೊತ್ತವಳು ನನ್ನ ತಾಯಿ ಭುವನೇಶ್ವರಿ.

----------------------------------

ನೋಂದಣಿ ಐಡಿ : KPFS2-7025

1
Votes
110
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top