Submission 2696

ಓ ನನ್ನ ಬಾಳಿನ ದಿಕ್ಸೂಚಿ

ರಚನೆ : ರವಿತೇಜ್ ಶಂಕರಪ್ಪ ಬಾಗೇವಾಡಿ

----------------------------------

ತುಂತುರು ಮಳೆ ಆಗುತ್ತಿರೆ ನಾನಾಗುವೆ ಕೊಡೆ, ಅಂತರ ಹೆಚ್ಚಾಗುತ್ತಿದೆ ಏನೀ ನಿನ್ನ ನಡೆ, ನಿರಂತರ ನೆನಪಿನಿಂದ ಎಂದಿಗೆ ನನ್ನ ಬಿಡುಗಡೆ? ಮನ್ವಂತರ ಬದಲಾಯಿಸಿ ಬಿಡುವೆ ನೀ ಒಮ್ಮೆ ನೋಡು ನನ್ನ ಕಡೆ. ಅಲಂಕಾರವೇ ಬೇಕಿಲ್ಲ ಬಲು ಸೋಜಿಗ ನೀನು, ಅಹಂಕಾರವೇ ಸೋಕಿಲ್ಲ ತುಸು ನಾಚಿಕೆ ಏನು? ತಮಂಧವನು ತೊರೆಯುವ ಬೆಳಕೇ ನೀನು, ಅಂಧಕಾರವನು ಅರಿಯದ ಕೊಳಕು ನಾನು. ಚಂದಿರನ ಮೀರಿಸುವ ಆ ನಿನ್ನ ಅಕ್ಷಿ, ನೋಡುತಲೇ ಹಾರಿ ಹೋದಂತಿದೆ ನನ್ನ ಪ್ರಾಣ ಪಕ್ಷಿ, ನಮ್ಮಿಬ್ಬರ ಅನುರಾಗಕ್ಕೆ ಸಮಯವೇ ಸಾಕ್ಷಿ, ಮತ್ತೊಮ್ಮೆ ಮರಳುವೆಯಾ ಓ ನನ್ನ ಬಾಳಿನ ದಿಕ್ಸೂಚಿ.

----------------------------------

ನೋಂದಣಿ ಐಡಿ : KPFS2-6806

0
Votes
111
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top