ಹೆಣ್ಣು
ರಚನೆ : ಸುಮಿತ್ರಾ ಜೆ
----------------------------------
ಹೆಣ್ಣು ಹೆಣ್ಣು ಎಂದೇಕೆ ಹೇಳುವೀರಿ: ನಿನ್ನ ಆದಿ ಹೆಣ್ಣಲ್ಲವೇ, ಬಾಲ್ಯದಲ್ಲಿ ತನ್ನ ಸಹೋದರರಿಗೆ ತಾಯಾಗಿ, ಯೌವನದಲ್ಲಿ ಗಂಡನಿಗೆ ಹೆಂಡತಿಯಾಗಿ, ಮುಪ್ಪಿನಲ್ಲಿ ಮಕ್ಕಳ ಪಾಲಿನ ದೇವತೆಯಾಗಿ, ಇರುವವಳೆ ಈ ಹೆಣ್ಣು... ತನ್ನ ಎಲ್ಲ ನೋವ ನುಂಗಿ ಎಲ್ಲಾರಿಗೂ ಸಂತೋಷ ಉಣಬಡಿಸುವಳು, ತನ್ನ ನೋವನ್ನು ಕ್ಷಣದಲ್ಲೇ ಮರೆಮಾಚುವವಳು, ಎಲ್ಲಾರಿಗೂ ನಗುವಿನ ಸಿಹಿ ಹಂಚಿದವಳು, ಪೂಜ್ಯನೀಯ ಸ್ತ್ರೀ ಇವಳು... ಹೆಣ್ಣೆಂದರೆ ಕೇವಲ ಹೆಣ್ಣಲ್ಲ, ಸ್ವಚ್ಛಂದ ಮನಸ್ಸಿನ ಕಣ್ಣವಳು, ಪದಗಳು ಸಾಲವು ವರ್ಣನೆಗೆ, ಸುಂದರ ಮನಸ್ಸಿನ ಶಿಲ್ಪಿಗೆ...
----------------------------------
ನೋಂದಣಿ ಐಡಿ : KPFS2-6805