Submission 2448

ಏಕಾಂತಕ್ಕೆ ಜೊತೆಯಾದ ಒಳಮನ

ರಚನೆ : ಶೋಭಾ ಎಸ್ ಬಂದಗಿ

----------------------------------

ಓ ಅಂತರಾತ್ಮವೇ. ಇಹರೇ ನನಗಿಲ್ಲಿ ನಿನ್ಹೊರತು ಆಪ್ತರು? ಕಂಡಿಹೆನು ನಿನ್ನೊಳಗೇ ದೈವವ ನೂರು ನಡೆದರೂ ನೀನೇ.. ಎಡವಿದರೂ ನೀನೇ.. ನಾ ಆರಿಸಿದ ದಾರಿಯಲ್ಲವೇ ಜೊತೆ ಬರಲು ನಿನ್ಹೊರತು ಇರುವರಿನ್ಯಾರು? ಇರುವರಿನ್ಯಾರು? ಏಕಾಂತದಲಿ ಸುರಿವಾಗ ಕಣ್ಣಿಂದ ನೀರು ರಮಿಸಿದೆ ನೆಟ್ಟು ಭರವಸೆಯ ಬೇರು ಜಗದಲ್ಯಾರು ದೂರಿದರೇನು? ಜೊತೆ ತೊರೆದರೇನು? ಒಳಮನವರಿತವ ನೀನೇಯಲ್ಲವೇ.. ಕೃತಜ್ಞತೆಗೆ ನಿನಗಿಂತ ಅರ್ಹರಿನ್ಯಾರು? ಅರ್ಹರಿನ್ಯಾರು?

----------------------------------

ನೋಂದಣಿ ಐಡಿ : KPFS2-6636

2
Votes
129
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top