ಬದುಕು -ಬವಣೆ
ರಚನೆ : ಸೌಮ್ಯ ಜಯರಾಮ್
----------------------------------
ರಾಜಕಾರಣದ ಬೇಳೆ ಬೇಯಲು ಬಡವನೆ ಉರುವಲು ಜಾತಿ ಜಾತಿಗಳ ಬಡಿದಾಟದಲಿ ಬಡವನೆ ದಾಳವು ರಾಜಕಾರಣದ ಉಳಿವಿಗಾಗಿ ಉರುಳಿತು ಬಡವನ ಕೊರಳು ಅಧಿಕಾರದ ಅಹಂಕಾರದಲಿ ಎಲ್ಲೆಲ್ಲೂ ಅಂಧಕಾರವು ಅಭಿವೃದ್ಧಿ ಎಂಬುದು ಕೈಗೆಟುಕದ ಹುಳಿ ದ್ರಾಕ್ಷಿಯು ಸಿರಿವಂತರ ಪಾಲಿಗಷ್ಟೇ ಮದಿರೆಯಾದ ಆ ದ್ರಾಕ್ಷಿಯು ಬಿಟ್ಟಿ ಭಾಗ್ಯದಲ್ಲಿ ಎಲ್ಲೋ ಕಳೆದೋದ ಜನರ ದುಡಿವ ಶಕ್ತಿಯು ದುಡ್ಡಿಲ್ಲದ ಸರಕಾರದಲಿ ಅವ್ಯವಸ್ಥೆ ಯದೇ ಮೇಲ್ಗಯು ಈ ಸಮಾಜ ವ್ಯವಸ್ಥೆಯಲಿ ಎಲ್ಲವೂ ಅವ್ಯವಸ್ಥಿತ ತೆರಿಗೆ ತೆತ್ತ ಸಾಮಾನ್ಯನಿಗೆ ಜೀವನವೇ ಅಹಿತ ಕಾಯುತಿವೆ ಮೈತುಂಬ ಗಾಯ ಹೊತ್ತ ರಸ್ತೆಗಳು ದುರಸ್ತಿಯನು ಇನ್ನಾದರೂ ಕಣ್ಣು ತೆರೆಯುವರೇ ಅಧಿಕಾರ ಹೊತ್ತ ಮಹನೀಯರು
----------------------------------
ನೋಂದಣಿ ಐಡಿ : KPFS2-6624