ಓ ಮನಸೇ.
ರಚನೆ : ವಿಷ್ಣು. ಆರ್. ಜೋಶಿ
----------------------------------
ಓ ಮನಸೇ... ಹೇಳು ನೀನ ಏಕೆ ಹೀಗೆ.? ನಗುವಾಗ ಅಳಿಸುವೆ.. ಅಳುವಾಗ ನಗಿಸುವೆ.. ಸೋತಾಗ ಗೆಲ್ಲಿಸುವೆ.. ಗೆಲುವಾಗ ಸೋಲಿಸುವೆ.. ಪ್ರೀತಿಸಿದವರನ ದ್ವೇಷಿಸುವೆ.. ದ್ವೇಷಿಸಿದವರನೆ ಮತ್ತೆ ಪ್ರೀತಿಸುವೆ.. ಹೂಸ ಸಂಬಂಧಗಳನ್ನು ಬೆಳೆಸುವೆ.. ಹಳೆ ಬಂಧಗಳನ್ನು ಬಿಡಿಸುವೆ... ಕ್ಷಣಕ್ಕೊಂದು ಅವತಾರ ತಾಳುವೆ.. ನಿನ್ನ ತಾಳಕೆ ತಕ್ಕಂತೆ ಈ ಮನುಷ್ಯನ ಆಡಿಸುವೆ.. ಮತ್ತೊಮ್ಮೆ ಕೇಳುತ್ತಿರುವೆ ಓ ಮನಸೇ.. ಹೇಳು.. ನೀನ ಏಕೆ ಹೀಗೆ ? ನೀನ ಏಕೆ ಹೀಗೆ ?
----------------------------------
ನೋಂದಣಿ ಐಡಿ : KPFS2-6619