Submission 2418

ಭಕ್ತಿ ಭಂಡಾರಿಗೊಂದು ನಮನ

ರಚನೆ : ಲಿಂಗರಾಜ್ ಕುಂಸಪ್ಪ

----------------------------------

ಕಾಯಕವೇ ಕೈಲಾಸವೆಂದರು ಬಸವಣ್ಣನವರು ಅದನರಿತು ಮುಳುಗಬೇಕು ಕಾಯಕದೊಳು ನಾವೆಲ್ಲರು ಸಾವಿರಾರು ವಚನಗಳ ಸರದಾರರಿವರು ನಮ್ಮೆಲ್ಲರ ಜೀವನಕ್ಕೆ ಸರಳ ಸೂತ್ರರಿವರು. ಮನಕೆ ಸಿಗುವುದು ಪರಿವರ್ತನೆ ಬಸವರ ವಚನಗಳಿಂದ ತಿಳಿದು ಬದುಕಬೇಕು ನಾವೆಲ್ಲರೂ ಆತ್ಮಶುದ್ಧಿಯಿಂದ ಮರು ಕ್ಷಣವೇ ಸಿಗುವುದು ಮನಕೆ ಆನಂದ ಬದುಕಬೇಕು ಸರ್ವರೆಲ್ಲ ಸಮಾನತೆಯಿಂದ. ಬಡವ ಬಲ್ಲಿಗರೆಲ್ಲರಿಗೂ ಒಂದೇ ಸಮಾನತೆಯ ದಾರಿ ತೋರಿಸಿದವರು ಇವರು ತೋರಿದ ದಾರಿನಡೆದು ಆಗಬೇಕು ನಾವೆಲ್ಲ ಶ್ರೇಷ್ಟರು. ಅನುಭವ ಮಂಟಪಕೆ ಬೆಳಕಿನ ದೀಪ ಇವರು ಜಗದ ಜನಕೆಲ್ಲ ದಾರಿದೀಪ ಇವರು ಬಂಗಾರದ ಆಡಂಬರ ಆಭರಣ ಬೇಕಿಲ್ಲ ಇವರಿಗೆ ಎಳೆಯಾಗಿ ಹೊಳೆಯುವ ವಿಭೂತಿಯೇ ಸಾಕು ಈ ನಮ್ಮ ಭಕ್ತಿ ಭಂಡಾರಿಗೆ.

----------------------------------

ನೋಂದಣಿ ಐಡಿ : KPFS2-6611

1
Votes
117
Views
1 Year
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top