Submission 2420

ನಮ್ಮ ಉತ್ತರ ಕರ್ನಾಟಕ

ರಚನೆ : ಅಶ್ವಿನಿ ಹಿರೇಮಠ

----------------------------------

ಬಿಸಿಲ ಊರ ನಮ್ಮದೈತಿ ಹುಡುಕಬ್ಯಾಡರಿ ನಮ್ಮ ಉರಾಗ ಹಸಿರ ಕಾಡ, ಆದರೆ ಅಲ್ಲಿನ ನಿಸರ್ಗ ನಮಗ ಸ್ವರ್ಗ ಅನಸತೈತಿ. ಮುಂಜಾನೆ ಎದ್ರ ಸಾಕ ನೇಗಿಲ ಹಿಡಿಕೊಂಡ ರಾಜನಂಗ ಹೊಗತಾರ ನಮ್ಮ ರೈತರ, ಇಂದಲ್ಲಾ ನಾಳೆ ಎಂಬ ಬದುಕು ಕಟ್ಕೊಂಡತಾರ ನಮ್ಮ ಜನರ. ನಮ್ಮಮಾತು ಸ್ವಲ್ಪ ಕಾರ ಅನಸತೈತಿ ಆದರೆ ನಮ್ಮ ಮನಸ್ಸು ಧಾರವಾಡದ ಪೇಡಾ ಇದ್ದಂಗ ಐತಿ. ಅಕ್ಕ -ಪಕ್ಕದ ಮಂದಿ ಎಷ್ಟೇ ವರಗಿದ್ದರು ನೊಂದ ಮನಸ್ಸಿಗೆ ಬದುಕು ಕಟ್ಟಿಕೊಡತಾರ ನಮ್ಮ ಜನರ. ಬಯಲು ಸೀಮೆಯ ನಾಡು ಐತಿ ನಮ್ಮದು ಮೆಟ್ಟಿ ನಿಂತೆವು ಹೊರತು ತಲೆತಗ್ಗಿಸುವ ಮಂದಿ ನಾವಲ್ಲ.

----------------------------------

ನೋಂದಣಿ ಐಡಿ : KPFS2-6613

111
Votes
545
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top